15
ಯೆಹೂದ ಕುಲದ ಸ್ವತ್ತು
ಎದೋಮ್ ಸೀಮೆಯೂ, ಚಿನ್ ಅರಣ್ಯದ ಮೇರೆಯಾಗಿರುವ ಕಾನಾನ ದೇಶದ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿತು. ಅದರ ದಕ್ಷಿಣದ ಮೇರೆಯು * 15:2 ಮರಣ ಸಮುದ್ರ.ಲವಣ ಸಮುದ್ರದ ತೆಂಕಣ ಕೊನೆಯಿಂದ ಅಕ್ರಬ್ಬೀಮ್ ಕಣಿವೆಯ ದಕ್ಷಿಣ ಮಾರ್ಗವಾಗಿ ಚಿನಿಗೆ ಹೋಗುತ್ತದೆ. ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ ಅಚ್ಮೋನಿನ ಮೇಲೆ, ಐಗುಪ್ತದ ಹಳ್ಳಕ್ಕೆ ಬಂದು ಸಮುದ್ರತೀರವನ್ನು ಸೇರುವುದು. ಇದು ಅದರ ತೆಂಕಣ ಮೇರೆ. ಯೊರ್ದನ್ ನದಿಯ ಮುಖದ್ವಾರದಿಂದ ಲವಣ ಸಮುದ್ರವೆಲ್ಲಾ, ಅದರ ಪೂರ್ವದಿಕ್ಕಿನ ಮೇರೆ ಆಗಿದೆ. ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನ್ ನದಿಯು ಲವಣ ಸಮುದ್ರದಿಂದ ಕೂಡುವ ಸ್ಥಳದಿಂದ ಬೇತ್ ಹೊಗ್ಲಾ ಬೇತ್ ಆರಾಬದ ಉತ್ತರ ಪ್ರಾಂತ್ಯ ರೂಬೇನನ ಮಗನಾದ ಬೋಹನನ ಬಂಡೆ, ಆಕೋರಿನ ಕಣಿವೆ ಇವುಗಳ ಮೇಲೆ ದೆಬೇರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ಹಳ್ಳದ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್ ಏನ್ ಷೆಮೆಷ್ ಅನ್ನಿಸಿಕೊಳ್ಳುವ ಬುಗ್ಗೆ ಏನ್ ರೋಗೆಲ್ ಇವುಗಳ ಮೇಲೆ ಬೆನ್ ಹಿನ್ನೋಮ್ ಕಣಿವೆಗೆ ಹೋಗುತ್ತದೆ. ಅಲ್ಲಿಂದ ಅದು ಯೆರೂಸಲೇಮ್ ಪಟ್ಟಣವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲಿರುವ ರೆಫಾಯೀಮ್ ಕಣಿವೆಯ ಉತ್ತರದಲ್ಲಿರುವ ಬೆಟ್ಟದ ತುದಿಗೆ ಹೋಗುತ್ತದೆ. ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಫ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ಪಟ್ಟಣಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನ್ನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ. 10 ಅಲ್ಲಿಂದ ಪಶ್ಚಿಮದಲ್ಲಿರುವ ಸೇಯೀರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನ್ನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು 11 ಮುಂದೆ ಉತ್ತರದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾ ಗುಡ್ಡದ ಮೇಲೆ ಯಬ್ನೇಲಿಗೆ ಹೋಗಿ ಸಮುದ್ರದಲ್ಲಿ ಮುಗಿಯುತ್ತದೆ. 12 ಮಹಾಸಾಗರದ ತೀರವೇ ಪಶ್ಚಿಮ ಮೇರೆಯು. ಯೆಹೂದಾ ಗೋತ್ರಗಳ ದೇಶದ ಸುತ್ತಣ ಮೇರೆಗಳು ಇವೇ.
ಕಾಲೇಬನಿಗೆ ಕೊಡಲಾದ ಹೆಬ್ರೋನ್
13 ಯೆಹೋಶುವನು ಯೆಹೋವನ ಅಪ್ಪಣೆಯಂತೆ ಯೆಫುನ್ನೆಯ ಮಗನಾದ ಕಾಲೇಬನಿಗೆ ಯೆಹೂದ ಕುಲದವರ ಮಧ್ಯದಲ್ಲಿಯೇ ಅನಾಕನ ತಂದೆಯಾದ ಅರ್ಬನ ಪಟ್ಟಣವಾಗಿದ್ದ ಹೆಬ್ರೋನನ್ನು ಕೊಟ್ಟನು. 14 ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು. 15 ಆನಂತರ ಅವನು ಹೊರಟು ಕಿರ್ಯತಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧ ಮಾಡಿದನು. 16 ಅವನು “ಕಿರ್ಯತಸೇಫೆರನ್ನು ಹಿಡಿದುಕೊಳ್ಳವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಡುತ್ತೇನೆ” ಎಂದನು. 17 ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನೀಯೇಲನು ಅದನ್ನು ವಶಪಡಿಸಿಕೊಂಡನು. ಅವನಿಗೆ ಕಾಲೇಬನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಟ್ಟನು. 18 ಆಕೆಯು ತನ್ನ ತಂದೆಯ ಮನೆ ಸೇರಿದಾಗ, ತನ್ನ ತಂದೆಯ ಹತ್ತಿರ ಭೂಮಿಯನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯ ಮೇಲಿಂದ ಇಳಿದಳು ಕಾಲೇಬನು, “ನಿನಗೇನು ಬೇಕು” ಎಂದು ಆಕೆಯನ್ನು ಕೇಳಲು 19 ಆಕೆಯು “ನನಗೊಂದು ಕೊಡುಗೆ ಬೇಕು. ನನ್ನನ್ನು ದಕ್ಷಿಣ ದೇಶದ ಬೆಂಗಾಡಿಗೆ (ಬರಡು ಭೂಮಿ) ಕೊಟ್ಟುಬಿಟ್ಟೆಯಲ್ಲಾ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಎಂದಳು. ಆಗ ಅವನು ಆಕೆಗೆ ಮೇಲಣ ಮತ್ತು ಕೆಳಗಣ ಬುಗ್ಗೆಗಳನ್ನು ಕೊಟ್ಟನು.
ಯೆಹೂದ ಕುಲದವರಿಗೆ ದೊರೆತ ನಗರಗಳು ಹಾಗು ಗ್ರಾಮಗಳು
20 ಯೆಹೂದದ ಕುಲಗೋತ್ರಗಳಿಗೆ ಸಿಕ್ಕಿದ ಸ್ವತ್ತಿನ ವಿವರ: 21 ಎದೋಮ್ ಪ್ರಾಂತ್ಯದ ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಏದೆರ್, ಯಾಗೂರ್, 22 ಕೀನಾ, ದೀಮೋನ್, ಅದಾದ್, 23 ಕೆದೆಷ್, ಹಾಚೋರ್, ಇತ್ನಾನ್, 24 ಜೀಫ್, ಟೆಲೆಮ್, ಬೆಯಾಲೋತ್, 25 ಹಾಚೋರ್ ಹದತ್ತಾ, ಹಾಚೋರ್ ಎಂಬ ಕಿರ್ಯೋತ್, ಹೆಚ್ರೋನ್, ಹಾಚೋರ್, 26 ಅಮಾಮ್, ಶೆಮ, ಮೋಲಾದಾ, 27 ಹಚರ್ ಗದ್ದಾ, ಹೆಷ್ಮೋನ್, ಬೇತ್ಪೆಲೆಟ್, 28 ಹಚರ್ ಷೂವಾಲ್, ಬೇರ್ಷೆಬ, ಬಿಜ್ಯೋತ್ಯಾ, 29 ಬಾಲಾ, ಇಯ್ಯೀಮ್, ಎಚೆಮ್, 30 ಎಲ್ಟೋಲದ್, ಕೆಸೀಲ್, ಹೊರ್ಮಾ, 31 ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ, 32 ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು, 33 ಇಳಿಜಾರು ಪ್ರದೇಶದಲ್ಲಿ ಎಷ್ಟಾವೋಲ್, ಚೊರ್ಗಾ, ಅಶ್ನಾ 34 ಜನೋಹ, ಏಂಗನ್ನೀಮ್, 35 ತಪ್ಪೂಹ, ಏನಾಮ್, ಯರ್ಮೂತ್, 36 ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 37 ಚೆನಾನ್, ಹದಾಷಾ, ಮಿಗ್ದಲ್ಗಾದ್, 38 ದಿಲಾನ್, ಮಿಚ್ಪೆ, ಯೊಕ್ತೇಲ್, 39 ಲಾಕೀಷ್, ಬೊಚ್ಕತ್, ಎಗ್ಲೋನ್, 40 ಕಬ್ಬೋನ್, ಲಹ್ಮಾಸ್, ಕಿತ್ಲೀಷ್, ಗೆದೇರೋತ್, ಬೇತ್‌ದಾಗೋನ್, ನಾಮಾ, 41 ಮಕ್ಕೇದಾ, ಎಂಬ ಹದಿನಾರು ಪಟ್ಟಣಗಳೂ, ಅವುಗಳ ಗ್ರಾಮಗಳು. 42 ಲಿಬ್ನಾ, ಎತೆರ್, ಆಷಾನ್, 43 ಇಪ್ತಾಹ, 44 ಅಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ, ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 45 ಎಕ್ರೋನ್ ಸಂಸ್ಥಾನವೂ ಅದಕ್ಕೆ ಸೇರಿದ ಗ್ರಾಮ ಪಟ್ಟಣಗಳು. 46 ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು; 47 ಮತ್ತು ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ ಪಟ್ಟಣಗಳು; ಗಾಜಾ ಸಂಸ್ಥಾನ ಹಾಗೂ ಐಗುಪ್ತ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲಾ ಗ್ರಾಮ, ಪಟ್ಟಣಗಳು. 48 ಬೆಟ್ಟದ ಮೇಲಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ, 49 ದನ್ನಾ, ದೆಬೀರ್, ಎಂಬ ಕಿರ್ಯತ್ ಸನ್ನಾ, 50 ಅನಾಬ್, ಎಷ್ಟೆಮೋ, ಅನೀಮ್, 51 ಗೋಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 52 ಅರಬ್, ದೂಮಾ, ಎಷಾನ್, 53 ಯಾನೂಮ್, ಬೇತ್ ತಪ್ಪೂಹ, ಅಫೇಕಾ, 54 ಹುಮ್ಟಾ, ಹೆಬ್ರೋನೆಂಬ ಕಿರ್ಯತ್‌ಅರ್ಬ, ಚೀಯೋರ್ ಎಂಬ ಒಂಭತ್ತು ಪಟ್ಟಣಗಳೂ ಮತ್ತು ಅವುಗಳ ಗ್ರಾಮಗಳು. 55 ಮಾವೋನ್, 56 ಕರ್ಮೆಲ್, ಜೀಫ್, ಯುಟ್ಟಾ, 57 ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ಪಟ್ಟಣಗಳು ಮತ್ತು ಅವುಗಳ ಗ್ರಾಮಗಳು. 58 ಹಲ್ಹೂಲ್, ಬೇತ್‌ಚೂರ್, ಗೆದೋರ್, 59 ಮಾರಾತ್, ಬೇತನೋತ್, ಎಲ್ಟೆಕೋನ್ ಎಂಬ ಆರು ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು. 60 ಕಿರ್ಯಾತ್ಯಾರೀಮ್ ಅನಿಸಿಕೊಳ್ಳುವ ಕಿರ್ಯಾತ್ ಬಾಳ್, ರಬ್ಬಾ ಎಂಬ ಎರಡು ಪಟ್ಟಣಗಳು ಮತ್ತು ಅವುಗಳು ಗ್ರಾಮಗಳು. 61 ಅರಣ್ಯದಲ್ಲಿರುವ ಬೇತ್ ಆರಾಬಾ, ಮಿದ್ದೀನ್, ಸೆಕಾಕಾ, 62 ನಿಬ್ಷಾನ್, ಉಪ್ಪಿನ ಪಟ್ಟಣವು, ಏಂಗೆದೀ ಎಂಬ ಆರು ಪಟ್ಟಣಗಳು, ಅವುಗಳ ಗ್ರಾಮಗಳು. 63 ಯೆರೂಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಯೆರೂಸಲೇಮಿನಲ್ಲೇ ವಾಸವಾಗಿದ್ದಾರೆ.

*15:2 15:2 ಮರಣ ಸಮುದ್ರ.